ಅಧ್ಯಾಯ 7

ಮಾರ್ಕನು ಬರೆದ ಸುಸಂದೇಶಗಳು




ಊಟದಿಂದ ಮನುಷ್ಯರು ಕೆಡುವುದಿಲ್ಲವೆಂದು ಯೇಸು ಬೋಧಿಸಿದ್ದು
(ಮತ್ತಾಯ 15:1-20)

1ತರುವಾಯ ಜೆರುಸಲೇಮಿನಿಂದ ಬಂದಿದ್ದ ಫರಿಸಾಯರೂ, ಧರ್ಮಶಾಸ್ತ್ರಿಗಳಲ್ಲಿ ಕೆಲವರೂ ಯೇಸುವಿನ ಬಳಿಗೆ ಬಂದರು. 2ಯೇಸುವಿನ ಶಿಷ್ಯರಲ್ಲಿ ಕೆಲವರು ಅಶುದ್ಧವಾದ ಅಂದರೆ ತೊಳೆಯದಿರುವ ಕೈಗಳಿಂದ ರೊಟ್ಟಿ ತಿನ್ನುವುದನ್ನು ಅವರು ನೋಡಿದ್ದರು. 3ಫರಿಸಾಯರು ಮತ್ತು ಯೆಹೂದ್ಯರು ಹಿರಿಯರ ಸಂಪ್ರದಾಯವನ್ನು ಅನುಸರಿಸುತ್ತಾ ತಮ್ಮ ಕೈಗಳನ್ನು ಅನೇಕ ಸಾರಿ ತೊಳೆದುಕೊಳ್ಳುತ್ತಿದ್ದರು. ಕೈ ತೊಳೆದುಕೊಳ್ಳದ ಹೊರತು ಅವರು ಊಟಮಾಡುವುದಿಲ್ಲ. 4ಅವರು ಪೇಟೆಯಿಂದ ಬಂದಾಗ ಸ್ನಾನ ಮಾಡದೆ ಊಟಮಾಡುತ್ತಿರಲಿಲ್ಲ; ಅವರು ಬಟ್ಟಲುಗಳನ್ನು, ಪಾತ್ರೆಗಳನ್ನು, ಹಿತ್ತಾಳೆಯ ಪಾತ್ರೆಗಳನ್ನು, ಮೇಜುಗಳನ್ನು ತೊಳೆಯುವಂಥ ಅನೇಕ ಆಚಾರಗಳನ್ನು ಅನುಸರಿಸುತ್ತಿದ್ದರು
5ಫರಿಸಾಯರೂ ಶಾಸ್ತ್ರಿಗಳೂ ಯೇಸುವಿನ ಬಳಿ ಬಂದು ಅವರಿಗೆ,
"ನಿನ್ನ ಶಿಷ್ಯರು ಹಿರಿಯರ ಸಂಪ್ರದಾಯದ ಪ್ರಕಾರ ಕೈತೊಳೆದುಕೊಳ್ಳದೆ ರೊಟ್ಟಿಯನ್ನು ಹೇಗೆ ತಿನ್ನುತ್ತಾರೆ?"
ಎಂದು ಕೇಳಿದರು. 6ಯೇಸುವು ಪ್ರತ್ಯುತ್ತರವಾಗಿ ಅವರಿಗೆ
ಕಪಟಿಗಳಾದ ನಿಮ್ಮ ವಿಷಯದಲ್ಲಿ ಯೆಶಾಯನು ಯೋಗ್ಯವಾಗಿಯೇ ಪ್ರವಾದಿಸಿದ್ದಾನೆ
' ಜನರು ಸನ್ಮಾನಿಸುವರೆನ್ನನು ಬರಿ ಮಾತಿನಿಂದಅವರ ಮನಸ್ಸು ದೂರವಾಗಿಹುದೆನ್ನಿಂದ 7ಮನುಕಟ್ಟಳೆಗಳ ಬೋಧಿಸಿ ಕಲಿಸುವರವರು ವ್ಯರ್ಥವು ಅವರೆನ್ನನು ಆರಾಧಿಸುವುದು' ಎಂದು ಬರೆಯಲ್ಪಟ್ಟ ಪ್ರಕಾರ 8ನೀವು ದೇವರ ಆಜ್ಞೆಯನ್ನು ಬದಿಗೆ ತಳ್ಳುವುದಕ್ಕಾಗಿ ಪಾತ್ರೆಗಳನ್ನು ಮತ್ತು ಬಟ್ಟಲುಗಳನ್ನು ತೊಳೆಯಬೇಕೆನ್ನುವ ಮಾನವ ಸೃಷ್ಟಿಸಿದ ಅನೇಕ ಸಂಪ್ರದಾಯಗಳನ್ನು ಹಿಡಿದು ಅನುಸರಿಸುತ್ತೀರಿ,"
ಎಂದರಲ್ಲದೇ,
9"ನೀವು ನಿಮ್ಮ ಸಂಪ್ರದಾಯವನ್ನು ಕೈಗೊಳ್ಳುವ ಸಲುವಾಗಿ ದೇವರ ಆಜ್ಞೆಯನ್ನು ಸಂಪೂರ್ಣವಾಗಿ ಅಸಡ್ಡೆ ಮಾಡುತ್ತೀರಿ. ಬಹು ಚೆನ್ನಾಗಿದೆ; 10ಮೋಶೆಯು, 'ನಿನ್ನ ತಂದೆ-ತಾಯಿಯನ್ನು ಗೌರವಿಸಬೇಕೆಂದೂ ಮತ್ತು ನಿನ್ನ ತಂದೆಯನ್ನಾಗಲಿ, ತಾಯಿಯನ್ನಾಗಲಿ ದೂಷಿಸುವವನಿಗೆ ಮರಣದಂಡನೆ ಆಗಬೇಕೆಂದೂ ಹೇಳಿದ್ದಾನೆ. 11ಆದರೆ 'ಒಬ್ಬ ಮನುಷ್ಯನು ತನ್ನ ತಂದೆಯ ಅಥವಾ ತಾಯಿಯ ಸಂರಕ್ಷಣೆಗಾಗಿ ಕೊಡಬೇಕಾಗಿರುವುದನ್ನು ದೇವರಿಗಾಗಿ ಇಟ್ಟಿದ್ದೇನೆ' ಎಂದು ಹೇಳಿದರೆ ನೀವು, 'ಅವನು ತನ್ನ ತಂದೆಗಾಗಲಿ, ತಾಯಿಗಾಗಲಿ ಇನ್ನೇನೂ ಮಾಡಬಾರದು' ಎಂದು ಹೇಳುತ್ತೀರಿ. 12ಅವನು ತನ್ನ ತಂದೆಗೂ, ತಾಯಿಗೂ ಏನನ್ನೂ ನೀವು ಮಾಡಗೊಡಿಸದಂತೆ 13ನೀವು ಕಲಿಸಿರುವ ನಿಮ್ಮ ಸಂಪ್ರದಾಯದ ಮೂಲಕ ದೇವರವಾಕ್ಯವನ್ನು ನಿರರ್ಥಕಮಾಡುತ್ತೀರಿ, ಮತ್ತು ಇಂತಹ ಇನ್ನೂ ಎಷ್ಟೋ ಮಾಡುತ್ತೀರಿ,"
ಎಂದರು. 14ಆಮೇಲೆ ಅವರು ಜನರನ್ನೆಲ್ಲಾ ತಮ್ಮ ಬಳಿಗೆ ಕರೆದು ಅವರಿಗೆ,
"ನಿಮ್ಮಲ್ಲಿ ಪ್ರತಿಯೊಬ್ಬನೂ ನಾನು ಹೇಳುವುದನ್ನು ಕೇಳಿ ತಿಳಿದುಕೊಳ್ಳಿರಿ; 15ಹೊರಗಿನಿಂದ ಮನುಷ್ಯನೊಳಕ್ಕೆ ಸೇರಿ ಅವನನ್ನು ಹೊಲಸುಮಾಡುವಂತಹದ್ದು ಯಾವುದೂ ಇಲ್ಲ. ಆದರೆ ಅವನ ಒಳಗಿನಿಂದ ಹೊರಗೆ ಬರುವಂತಹವುಗಳೇ ಮನುಷ್ಯನನ್ನು ಹೊಲಸು ಮಾಡುವುದು. 16ಯಾರಿಗಾದರೂ ಕೇಳುವುದಕ್ಕೆ ಕಿವಿಗಳಿದ್ದರೆ ಅವನು ಕೇಳಲಿ,"
ಎಂದರು

17ಯೇಸುವು ಜನರನ್ನು ಬಿಟ್ಟು ಮನೆಯೊಳಕ್ಕೆ ಬಂದ ಮೇಲೆ ಅವರ ಶಿಷ್ಯರು ಸಾಮತಿಯ ವಿಷಯವಾಗಿ ಅವರನ್ನು ಕೇಳಿದರು. 18ಆಗ ಅವರು,
"ನೀವೂ ಸಹ ತಿಳಿದುಕೊಳ್ಳಲು ಅಶಕ್ತರಾಗಿದ್ದೀರಾ? ಹೊರಗಿನಿಂದ ಮನುಷ್ಯನೊಳಕ್ಕೆ ಸೇರುವಂಥದ್ದು ಯಾವುದೂ ಅವನನ್ನು ಹೊಲಸು ಮಾಡಲಾರದು 19ಏಕೆಂದರೆ ಅದು ಅವನ ಹೃದಯದೊಳಗೆ ಸೇರದೆ ಹೊಟ್ಟೆಯೊಳಗೆ ಹೋಗಿ ಬಹಿರ್ದೆಶೆಗೆ ಹೋಗುವುದರಿಂದ ಅವನನ್ನು ಹೊಲಸು ಮಾಡಲಾರದು. 20ಮತ್ತು ಮನುಷ್ಯನೊಳಗಿನಿಂದ ಹೊರಡುವಂಥದ್ದೇ ಮನುಷ್ಯನನ್ನು ಹೊಲಸು ಮಾಡುತ್ತದೆ. 21ಏಕೆಂದರೆ ಮನುಷ್ಯರ ಹೃದಯದೊಳಗಿಂದ ಹೊರಡುವಂಥದ್ದು ಅವರ ಕೆಟ್ಟಆಲೋಚನೆಗಳು, ವ್ಯಭಿಚಾರಗಳು, ಹಾದರಗಳು, ಕೊಲೆಗಳು, 22ಕಳ್ಳತನಗಳು, ದುರಾಸೆ, ಕೆಟ್ಟತನ, ಮೋಸ, ಕಾಮಾಭಿಲಾಷೆ, ಕೆಟ್ಟದೃಷ್ಟಿ, ದೇವದೂಷಣೆ, ಗರ್ವ, ಬುದ್ಧಿಗೇಡಿತನ, 23 ಎಲ್ಲಾ ಕೆಟ್ಟವುಗಳು ಮನುಷ್ಯನೊಳಗಿನಿಂದ ಬಂದು ಅವನನ್ನು ಹೊಲಸು ಮಾಡುತ್ತವೆ,"
ಎಂದರು

ಯೇಸು ಅನ್ಯಮತಸ್ಥಳ ಮಗಳನ್ನೂ, ಒಬ್ಬ ಮೂಗನನ್ನೂ ಗುಣಪಡಿಸಿದ್ದು
(ಮತ್ತಾಯ 15:21-28)
24ಅಲ್ಲಿಂದ ಯೇಸುವು ಎದ್ದು ಹೊರಟು ತೂರ್ಸೀದೋನ್ಪ್ರಾಂತ್ಯಗಳಿಗೆ ಹೋಗಿ ಅಲ್ಲಿಯ ಒಂದು ಮನೆಯಲ್ಲಿ ಯಾರಿಗೂ ತಿಳಿಯದಂತೆ ತಂಗಲು ಪ್ರಯತ್ನಿಸಿದರು. ಆದರೆ ಹಾಗೆ ಮರೆಯಾಗಿರಲು ಅವರಿಗೆ ಸಾಧ್ಯವಾಗದೇ ಹೋಯಿತು. 25ಕೂಡಲೇ ಒಬ್ಬ ಹೆಂಗಸು ಯೇಸುವಿನ ವಿಷಯ ಕೇಳಿ ಅಲ್ಲಿಗೆ ಬಂದು ಅವರ ಪಾದಗಳಿಗೆ ಬಿದ್ದಳು. ಆಕೆಯ ಮಗಳಿಗೆ ದೆವ್ವ ಹಿಡಿದಿತ್ತು. 26 ಸ್ತ್ರೀಯು ಅನ್ಯಮತದವಳೂ, ಸುರೋಪೊಯಿನಿಕ ಜನಾಂಗದವಳೂ ಆದ ಒಬ್ಬ ಗ್ರೀಕಳು. ಆಕೆಯು ತನ್ನ ಮಗಳಿಗೆ ಹಿಡಿದ ದೆವ್ವವನ್ನು ಬಿಡಿಸಬೇಕೆಂದು ಯೇಸುವನ್ನು ಬೇಡಿಕೊಂಡಳು. 27ಆದರೆ ಯೇಸು ಆಕೆಗೆ,
"ಮಕ್ಕಳಿಗೆ ಮೊದಲು ತೃಪ್ತಿಯಾಗಲಿ; ಏಕೆಂದರೆ ಮಕ್ಕಳ ರೊಟ್ಟಿಯನ್ನು ತೆಗೆದುಕೊಂಡು ನಾಯಿಗಳಿಗೆ ಹಾಕುವುದು ಸರಿಯಲ್ಲ,"
ಎಂದು ಹೇಳಿದರು. 28ಆಕೆಯು ಪ್ರತ್ಯುತ್ತರವಾಗಿ,
"ಹೌದು, ಸ್ವಾಮಿ; ಆದರೂ ಮೇಜಿನ ಕೆಳಗೆ ಬಿದ್ದ ಮಕ್ಕಳ ರೊಟ್ಟಿಯ ತುಂಡುಗಳನ್ನು ನಾಯಿಗಳು ತಿನ್ನಬಹುದಲ್ಲವೇ?"
ಎಂದಳು. 29ಯೇಸುವು ಅವಳಿಗೆ,
" ಮಾತನ್ನು ಹೇಳಿದ್ದರಿಂದ ದೆವ್ವವು ನಿನ್ನ ಮಗಳನ್ನು ಬಿಟ್ಟು ಹೋಗಿದೆ, ನೀನು ಹೋಗು,"
ಎಂದರು. 30ಆಕೆ ತನ್ನ ಮನೆಗೆ ಬಂದಾಗ ತನ್ನ ಮಗಲಿಗೆ ಹಿಡಿದಿದ್ದ ದೆವ್ವವು ಅವಳನ್ನು ಬಿಟ್ಟು ಹೊರಟು ಹೋದದ್ದನ್ನೂ, ಮಗಳು ಹಾಸಿಗೆಯ ಮೇಲೆ ಮಲಗಿರುವುದನ್ನೂ ಕಂಡಳು
31ತಿರುಗಿ ಯೇಸುವು ತೂರ್ಸೀದೋನ್ತೀರಗಳಿಂದ ಹೊರಟು ದೆಕಪೊಲಿಯ ತೀರಗಳ ಮಧ್ಯದಿಂದ ಗಲಿಲೇಯ ಸಮುದ್ರದ ಬಳಿಗೆ ಬಂದರು. 32ಆಗ ಕೆಲವರು ತೊದಲು ಮಾತನಾಡುವ ಒಬ್ಬ ಕಿವುಡನನ್ನು ಯೇಸುವಿನ ಬಳಿಗೆ ತಂದು ಅವರ ಕೈಯನ್ನು ಕಿವುಡನ ಮೇಲೆ ಇಡಬೇಕೆಂದು ಬೇಡಿಕೊಂಡರು. 33ಅವರು ಕಿವುಡನನ್ನು ಜನಸಮೂಹದಿಂದ ಆಚೆಗೆ ಕರೆದುಕೊಂಡು ಹೋಗಿ ತಮ್ಮ ಬೆರಳುಗಳನ್ನು ಅವನ ಕಿವಿಗಳಲ್ಲಿಟ್ಟು ಉಗುಳಿ 34ಅವನ ನಾಲಿಗೆಯನ್ನು ಮುಟ್ಟಿ ಆಕಾಶದ ಕಡೆಗೆ ನೋಡಿ ನಿಟ್ಟುಸಿರು ಬಿಟ್ಟು ಅವನಿಗೆ, "ಎಪ್ಫಥಾ" ಅಂದರೆ "ತೆರೆಯಲ್ಪಡಲಿ" ಎಂದು ಹೇಳಿದರು. 35ಕೂಡಲೆ ಅವನ ಕಿವಿಗಳು ತೆರೆಯಲ್ಪಟ್ಟವು; ಅವನ ನಾಲಿಗೆಯ ನರವು ಸಡಿಲವಾಯಿತು; ಮತ್ತು ಅವನು ಸ್ಪಷ್ಟವಾಗಿ ಮಾತನಾಡತೊಡಗಿದನು. 36ಯಾರಿಗೂ ಇದನ್ನು ಹೇಳಬಾರದೆಂದು ಯೇಸುವು ಅವನಿಗೆ ಹೇಳಿದರು; ಆದರೆ ರಹಸ್ಯವಾಗಿರಲಿ ಎಂದು ಎಷ್ಟು ಹೇಳಿದರೂ ಅವರು ಅದನ್ನು ಮತ್ತಷ್ಟು ಹೆಚ್ಚಾಗಿ ಪ್ರಚಾರ ಮಾಡಿದರು. 37ಜನರು ಅತ್ಯಾಶ್ಚರ್ಯಪಟ್ಟು,
"ಆತನು ಎಲ್ಲವುಗಳನ್ನು ಚೆನ್ನಾಗಿ ಮಾಡಿದ್ದಾನೆ; ಕಿವುಡರು ಕೇಳುವಂತೆಯೂ, ಮೂಕರು ಮಾತನಾಡುವಂತೆಯೂ ಮಾಡಿದ್ದಾನೆ,"
ಎಂದು ಮಾತನಾಡಿಕೊಂಡರು



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ