ಅಧ್ಯಾಯ 3

ಮಾರ್ಕನು ಬರೆದ ಸುಸಂದೇಶಗಳು



1ಇನ್ನೊಮ್ಮೆ ಯೇಸುವು ಸಭಾಮಂದಿರಕ್ಕೆ ಹೋದರು. ಅಲ್ಲಿ ಕೈಬತ್ತಿಹೋಗಿದ್ದ ಒಬ್ಬ ಮನುಷ್ಯನಿದ್ದನು. 2ಸಬ್ಬತ್ದಿನದಲ್ಲಿ ಯೇಸುವು ಮನುಷ್ಯನನ್ನು ವಾಸಿಮಾಡುವನೋ ಎಂದು ಫರಿಸಾಯರು ನಿಗೂಢವಾಗಿ ಪರಿಶೀಲಿಸುತ್ತಿದ್ದರು; ಯೇಸುವಿನ ಮೇಲೆ ಆರೋಪ ಹೊರಿಸುವುದು ಅವರ ಉದ್ದೇಶವಾಗಿತ್ತು.
3ಕೈಬತ್ತಿಹೋಗಿದ್ದ ಮನುಷ್ಯನನ್ನು ಕಂಡ ಯೇಸು ಅವನಿಗೆ,
ಎದ್ದು ನಡುವೆ ಬಾ,”
ಎಂದು ಹೇಳಿದರು.
4ಅನಂತರ ಅವರು ಫರಿಸಾಯರತ್ತ ತಿರುಗಿ,
ಸಬ್ಬತ್ದಿನದಲ್ಲಿ ಏನು ಮಾಡುವುದು ಧರ್ಮಸಮ್ಮತ? ಒಳ್ಳೆಯದನ್ನೋ, ಕೆಟ್ಟದ್ದನ್ನೋ? ಪ್ರಾಣವನ್ನು ಉಳಿಸುವುದೋ ಅಥವಾ ತೆಗೆಯುವುದೋ?”
ಎಂದು ಕೇಳಿದರು. ಅದಕ್ಕೆ ಅವರು ಯಾವ ಉತ್ತರವನ್ನು ನೀಡದೇ ಸುಮ್ಮನಿದ್ದರು. 5ಆಗ ಯೇಸುವು ತನ್ನ ಸುತ್ತಲೂ ಇದ್ದವರತ್ತ ಕೋಪದಿಂದ ನೋಡಿ, ಕಲ್ಲಾಗಿರುವ ಅವರ ಮನಸ್ಸನ್ನು ಕಂಡು ಬಹಳವಾಗಿ ನೊಂದರು, ಅನಂತರ ಮನುಷ್ಯನಿಗೆ,
ನಿನ್ನ ಕೈಚಾಚು,
ಎಂದು ಹೇಳಿದರು. ಅವನು ಕೈಯನ್ನು ಚಾಚಿದಾಗ ಅದು ಸರಿಯಾಯಿತು. 6ಆಗ ಫರಿಸಾಯರು ಅಲ್ಲಿಂದ ಹೊರಗೆ ಹೋಗಿ ಹೆರೋದನ ಕಡೆಯವರೊಂದಿಗೆ ಸೇರಿಕೊಂಡು ಯೇಸುವನ್ನು ಹೇಗೆ ಕೊಲ್ಲವುದೆಂಬ ಆಲೋಚನೆಯಲ್ಲಿ ತೊಡಗಿದರು.

ಹನ್ನೆರಡು ಮಂದಿ ಪ್ರೇಷಿತರ ನೇಮಕ
(ಮತ್ತಾಯ 10:1-4; ಲೂಕ 6:12-19)

7ಯೇಸು ತಮ್ಮ ಶಿಷ್ಯರೊಂದಿಗೆ ಸಮುದ್ರದ ಬಳಿಗೆ ಹೋದರು; ಗಲಿಲೇಯ ಮತ್ತು ಜುದೇಯದಿಂದ ಬಂದ ಜನರ ದೊಡ್ಡ ಗುಂಪು ಅವರನ್ನು ಹಿಂಬಾಲಿಸತೊಡಗಿತು. 8ಅವರು ಮಾಡುತ್ತಿದ್ದ ಎಲ್ಲ ಮಹತ್ಕಾರ್ಯಗಳ ಬಗ್ಗೆ ತಿಳಿದುಕೊಂಡು, ಜೆರುಸಲೇಮಿನಿಂದಲೂ, ಇದುಮೇಯದಿಂದಲೂ, ಜೋರ್ಡನ್ನದಿಯ ಆಚೆ ಕಡೆಯಿಂದಲೂ, ತೂರ್ಮತ್ತು ಸೀದೋನ್ಪಟ್ಟಣಗಳ ಸುತ್ತಮುತ್ತಲಿನ ಸ್ಥಳಗಳಿಂದಲೂ ಜನರು ಗುಂಪು ಗುಂಪಾಗಿ ಅವರ ಬಳಿಗೆ ಬಂದರು. 9ಜನರು ತಮ್ಮ ಮೈಮೇಲೆ ಬಿದ್ದು ನೂಕದಿರಲೆಂದು ಅವರು ಯಾವಾಗಲೂ ತಮಗಾಗಿ ಒಂದು ಚಿಕ್ಕ ದೋಣಿಯನ್ನು ಸಿದ್ಧವಾಗಿಟ್ಟಿರಲು ಶಿಷ್ಯರಿಗೆ ಹೇಳಿದ್ದರು. 10ಅವರು ಅನೇಕರನ್ನು ವಾಸಿಮಾಡಿದ್ದರಿಂದ, ಅವರನ್ನು ಮುಟ್ಟಲೆಂದು ಜನರು ಮೈಮೇಲೆ ಬೀಳುತ್ತಿದ್ದರು. 11ದೆವ್ವಗಳು ಸಹ ಅವರನ್ನು ಕಂಡಾಗ ಅಡ್ಡಬಿದ್ದು, “ನೀನು ದೇವಪುತ್ರನು,” ಎಂದು ಕಿರಿಚಿಹೇಳುತ್ತಿದ್ದವು. 12ಆದರೆ ತಾನು ಯಾರೆಂಬುದನ್ನು ಪ್ರಕಟಿಸಬಾರದೆಂದು ಅವರು ಅನೇಕ ಸಲ ಅವುಗಳಿಗೆ ಆಜ್ಞೆ ಮಾಡಿದ್ದರು.

13ತಮ್ಮ ಬೋಧನೆಯು ಮುಗಿದ ಬಳಿಕ ಅವರು ಬೆಟ್ಟವನ್ನೇರಿ ತಮಗೆ ಬೇಕಾದವರನ್ನು ಬಳಿಗೆ ಕರೆದರು. ಅವರು ಯೇಸುವಿನ ಬಳಿಗೆ ಹೋದರು. 14ಅಲ್ಲಿದ್ದವರಲ್ಲಿ ಹನ್ನೆರಡು ಮಂದಿಯನ್ನು ತಮ್ಮ ಸಂಗಡ ಇರುವುದಕ್ಕಾಗಿಯೂ ಮತ್ತು 15ದೆವ್ವಗಳನ್ನು ಬಿಡಿಸುವ ಅಧಿಕಾರ ನೀಡಲೂ, ಧರ್ಮಪ್ರಸಾರವನ್ನು ಸಾರುವ ಸಲುವಾಗಿಯೂ ಆಯ್ಕೆಮಾಡಿಕೊಂಡರು, ಅವರಿಗೆಪ್ರೇಷಿತರುಎಂಬ ಹೆಸರನ್ನಿಟ್ಟರು. 16ಅವರಲ್ಲಿ ಸೀಮೋನನೆಂಬವನಿಗೆ ಯೇಸು ಪೇತ್ರ ಎಂಬ ಉಪನಾಮವನ್ನು ಕೊಟ್ಟರು, 17ಜೆಬೆದಾಯನ ಮಗನಾದ ಯಕೋಬ, ಅವನ ಸಹೋದರ ಯೊವಾನ್ನ ಇವರಿಗೆಬೊವನೆರ್ಗೆಸ್‌’ ಎಂದರೆ, 'ಸಿಡಿಲಿನ ಮರಿಗಳು' ಎಂಬ ಉಪನಾಮವನ್ನು ಕೊಟ್ಟರು, 18ಅಂದ್ರೆಯ, ಫಿಲಿಪ್ಪ, ಬಾರ್ತೊಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗನಾದ ಯಕೋಬ, ತದ್ದಾಯ, ಕಾನಾನ್ಯನಾದ ಸೀಮೋನ 19ಮತ್ತು ಯೇಸುವನ್ನು ಹಿಡಿದುಕೊಟ್ಟ ಇಸ್ಕರಿಯೋತ ಯೂದ ಇವರುಗಳೇ ಇನ್ನುಳಿದ ಯೇಸುವಿನ ಶಿಷ್ಯರು.

ಧರ್ಮಶಾಸ್ತ್ರಿಗಳು ಯೇಸುವಿನ ಬಗ್ಗೆ ಅನುಮಾನಪಟ್ಟಿದ್ದು
(ಮತ್ತಾಯ 12:22-32; 46-50; ಲೂಕ 11:14-22; 8:19-21)

ತದನಂತರ ಯೇಸುವು ಒಂದು ಮನೆಗೆ ಹೋದರು. 20ಅಲ್ಲಿಗೂ ಜನರು ಗುಂಪಾಗಿ ಬಂದು ಸೇರಿದ್ದರಿಂದ ಅವರಿಗೆ ಊಟಮಾಡಲು ಸಾಧ್ಯವಾಗಲಿಲ್ಲ. 21ಅವರ ಸಂಬಂಧಿಕರು ಇದನ್ನು ಕೇಳಿಸಿಕೊಂಡು, “ಇವನಿಗೆ ಹುಚ್ಚುಹಿಡಿದಿದೆ,” ಎಂದು ಹೇಳುತ್ತಾ ಅವರನ್ನು ಹಿಡಿದು ತರಲು ಹೊರಟರು. 22ಇದಲ್ಲದೆ, ಜೇರುಸಲೇಮಿನಿಂದ ಬಂದಿದ್ದ ಧರ್ಮಶಾಸ್ತ್ರಿಗಳು, ಇವನನ್ನು ಬೆಲ್ಜೆಬೂಲನು ಹಿಡಿದಿದ್ದಾನೆಂದೂ, ಅದರ ಸಹಾಯದಿಂದ ಇವನು ದೆವ್ವಗಳನ್ನು ಬಿಡಿಸುತ್ತಾನೆಂದೂ ಹೇಳುತ್ತಿದ್ದರು.
23ಆಗ ಯೇಸುವು ಅವರನ್ನು ಹತ್ತಿರಕ್ಕೆ ಕರೆದು ಸಾಮತಿಯ ರೂಪದಲ್ಲಿ ಹೀಗೆ ಹೇಳಲಾರಂಭಿಸಿದರು:
ಸೈತಾನನು ಸೈತಾನನನ್ನೇ ಬಿಡಿಸುವುದು ಸಾಧ್ಯವೇ? 24ಒಂದು ರಾಜ್ಯದಲ್ಲಿ ಭೇದ ಹುಟ್ಟಿದರೆ ರಾಜ್ಯವು ಉಳಿಯಲಾರದು; 25ಒಂದು ಮನೆಯಲ್ಲಿ ಭೇದ ಹುಟ್ಟಿದರೆ ಮನೆಯೂ ನಿಲ್ಲಲಾರದು. 26ಅಂತೆಯೇ, ಸೈತಾನನು ತನಗೆ ವಿರುದ್ಧವಾಗಿಯೇ ಭೇದ ಹುಟ್ಟಿಸಿಕೊಂಡರೆ ಅವನು ನಿಲ್ಲಲಾರದೆ ನಾಶವಾಗುತ್ತಾನೆ. 27ಅಲ್ಲದೆ, ಒಬ್ಬನು ಬಲಿಷ್ಠನೊಬ್ಬನ ಮನೆಗೆ ನುಗ್ಗಿ ಮೊದಲು ಅವನನ್ನು ಕಟ್ಟಿಹಾಕದೆ ಅವನ ಮನೆಯಿಂದ ಏನನ್ನೂ ಸೂರೆಮಾಡಲಾಗುವುದಿಲ್ಲ. ಮೊದಲು ಅವನನ್ನು ಕಟ್ಟಿಹಾಕಿ, ನಂತರವೇ ಅವನ ಮನೆಯನ್ನು ಸೂರೆಮಾಡಬೇಕು,".
28ಇದಲ್ಲದೆ ಅವರು, ಇವನಿಗೆ ದೆವ್ವ ಹಿಡಿದಿದೆ ಎಂದು ಹೇಳಿದ್ದರಿಂದ ಯೇಸುವು ಅವರಿಗೆ,
29"ನಿಮಗೆ ಸತ್ಯವಾಗಿ ಹೇಳುತ್ತೇನೆ ಮನುಷ್ಯರು ಎಷ್ಟೇ ದೂಷಿಸಿದರೂ ಅವರು ಮಾಡಿದ ಪಾಪಗಳಿಗೆ, ದೂಷಣೆಗಳಿಗೆ ಕ್ಷಮಾಪಣೆ ಉಂಟು. 30ಆದರೆ, ಪವಿತ್ರಾತ್ಮನ ವಿರುದ್ಧ ದೂಷಣೆಮಾಡುವವನಿಗೆ ಎಂದಿಗೂ ಕ್ಷಮಾಪಣೆ ದೊರಕುವುದಿಲ್ಲ; ಅವನು ಶಾಶ್ವತ ಪಾಪದೊಳಕ್ಕೆ ಸಿಲುಕಿದವನಾಗಿರುತ್ತಾನೆ,”
ಎಂದು ಹೇಳಿದರು.  
31ಜನರು ಯೇಸುವಿನ ಸುತ್ತಲೂ ಕುಳಿತುಕೊಂಡಿದ್ದಾಗ ಯೇಸುವಿನ ತಾಯಿಯೂ, ತಮ್ಮಂದಿರೂ ಬಂದು ಹೊರಗೆ ನಿಂತು ಅವರನ್ನು ಕರೆಯಲು ಹೇಳಿಕಳುಹಿಸಿದರು. 32 ಜನರು ಯೇಸುವಿಗೆ,
ನಿಮ್ಮ ತಾಯಿಯೂ, ತಮ್ಮಂದಿರೂ ಹೊರಗೆ ನಿಮಗಾಗಿ ಕಾಯುತ್ತಿದ್ದಾರೆ,”
ಎಂದು ಹೇಳಿದಾಗ, 33ಪ್ರತ್ಯುತ್ತರವಾಗಿ ಯೇಸುವು,
ಯಾರು ನನ್ನ ತಾಯಿ ಮತ್ತು ತಮ್ಮಂದಿರು?”
ಎಂದು ಕೇಳಿ 34 ತಮ್ಮ ಸುತ್ತಲೂ ಕುಳಿತಿದ್ದವರತ್ತ ನೋಡಿ,
ಇದೋ, ಇವರೇ ನನ್ನ ತಾಯಿ ಮತ್ತು ತಮ್ಮಂದಿರು! 35ದೇವರ ಚಿತ್ತದಂತೆ ನಡೆಯುವವನೇ ನನ್ನ ತಮ್ಮನೂ, ತಂಗಿಯೂ, ತಾಯಿಯೂ ಆಗಬೇಕು
ಎಂದು ಹೇಳಿದರು.  



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ