ಅಧ್ಯಾಯ 15

ಮಾರ್ಕನು ಬರೆದ ಸುಸಂದೇಶಗಳು


ರಾಜ್ಯಪಾಲ ಪಿಲಾತನ ಸಮ್ಮುಖದಲ್ಲಿ ಯೇಸು
(ಮತ್ತಾಯ 27:1-2, 11-14; ಲೂಕ 23:1-5, ಯೊವಾನ್ನ 18;28-38)

1ಬೆಳಗಾದ ಕೂಡಲೆ, ಪ್ರಧಾನ ಯಾಜಕರು, ಹಿರಿಯ ಮುಖಂಡರೂ, ಧರ್ಮಶಾಸ್ತ್ರಿಗಳೂ ಮತ್ತು ನ್ಯಾಯಸಭೆಯ ಇತರ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ, ಯೇಸುವಿಗೆ ಬೇಡಿಯನ್ನು ಹಾಕಿಸಿ ಪಿಲಾತನ ಬಳಿಗೆ ಕರೆದೊಯ್ದು ಆತನಿಗೆ ಒಪ್ಪಿಸಿದರು. 2ಪಿಲಾತನು ಯೇಸುವಿಗೆ,
ನೀನು ಯೆಹೂದ್ಯರ ಅರಸನೋ?”
ಎಂದು ಕೇಳಲು, ಅವರು ಪ್ರತ್ಯುತ್ತರವಾಗಿ,
ಅದು ನಿಮ್ಮ ಬಾಯಿಯಿಂದಲೇ ಬಂದಿದೆ,”
ಎಂದು ಉತ್ತರವಿತ್ತರು. 3ಪ್ರಧಾನಯಾಜಕರು ಯೇಸುವಿನ ಮೇಲೆ ಅನೇಕ ದೂರುಗಳನ್ನು ಹೇಳಿದ್ದರು; ಆದುದರಿಂದ ಪಿಲಾತನು ಪುನಃ ಯೇಸುವಿಗೆ,
ಇವರು ಇಷ್ಟೊಂದು ಆಪಾದನೆಗಳನ್ನು ನಿನ್ನ ಮೇಲೆ ಹೊರಿಸುತ್ತಿರುವಾಗ ನೀನೇನೂ ಉತ್ತರವನ್ನು ಕೊಡುವುದಿಲ್ಲವೇ?”
ಎಂದು ಕೇಳಿದನು. 5ಆದರೂ ಯೇಸು ಉತ್ತರಕೊಡದೆ ಇರುವುದನ್ನು ಕಂಡು ಪಿಲಾತನು ಆಶ್ಚರ್ಯಪಟ್ಟನು.

ನಿರಪರಾಧಿಗೆ ಮರಣದಂಡನೆ
(ಮತ್ತಾಯ 27:15-26; ಲೂಕ 23:13-25; ಯೊವಾನ್ನ 18:39, 19:6)

6ಪ್ರತಿ ಪಾಸ್ಕಹಬ್ಬದ ಸಂದರ್ಭದಲ್ಲಿ ಜನರು ಕೇಳಿಕೊಂಡ ಒಬ್ಬ ಸೆರೆಯಾಳನ್ನು ಬಿಡುಗಡೆ ಮಾಡುವುದು ಪಿಲಾತನ ಪದ್ಧತಿಯಾಗಿತ್ತು.7ಆಗ ದಂಗೆಯೊಂದರಲ್ಲಿ ಕೊಲೆ ಮಾಡಿ ಬಂಧಿಸಲ್ಪಟ್ಟಿದ್ದ ಕೆಲವರು ಸೆರೆಮನೆಯಲ್ಲಿದ್ದರು. ಇವರೊಂದಿಗೆ ಬರಬ್ಬನೆಂಬವನೂ ಸೆರೆಯಲ್ಲಿ ಇದ್ದನು. 8ಆಗ ಜನಸಮೂಹವು ಪಿಲಾತನ ಬಳಿಗೆ ಹೋಗಿ, ಪದ್ಧತಿಯಂತೆ ವರ್ಷವೂ ಒಬ್ಬ ಕೈದಿಯನ್ನು ತಮಗೆ ಬಿಟ್ಟುಕೊಡಬೇಕೆಂದು ಗಟ್ಟಿಯಾಗಿ ಕೇಳಿದಾಗ,  9ಪಿಲಾತನು ಪ್ರತ್ಯುತ್ತರವಾಗಿ ಅವರಿಗೆ,
ಯೆಹೂದ್ಯರ ಅರಸನನ್ನು ನಿಮಗಾಗಿ ನಾನು ಬಿಟ್ಟುಕೊಡಬೇಕೋ?”
ಎಂದು ಕೇಳಿದನು.10ಏಕೆಂದರೆ ಪ್ರಧಾನಯಾಜಕರು ಬೇಕೆಂದೇ ಯೇಸುವನ್ನು ತನಗೆ ಒಪ್ಪಿಸಿದ್ದರೆಂದು ಆತನಿಗೆ ತಿಳಿದಿತ್ತು. 11ಆದರೆ ಪ್ರಧಾನಯಾಜಕರು ತಮಗೆ ಬರಬ್ಬನನ್ನೇ ಬಿಟ್ಟುಕೊಡುವಂತೆ ಜನರನ್ನು ಪ್ರೇರೇಪಿಸಿದ್ದನು. 12ಆಗ ಪಿಲಾತನು ಪುನಃ ಅವರಿಗೆ,
ಹಾಗಾದರೆ ನೀವು ಯೆಹೂದ್ಯರ ಅರಸನೆಂದು ಕರೆಯುವ ಈತನಿಗೆ ನಾನೇನು ಮಾಡಬೇಕನ್ನುತ್ತೀರಿ?”
ಎಂದು ಜನರನ್ನು ಕೇಳಿದನು.
13ಆತನನ್ನು ಶಿಲುಬೆಗೆ ಹಾಕಿಸು
ಎಂದು ಜನರು ಪುನಃ ಕೂಗಿ ಹೇಳಿದರು. 14ಆಗ ಪಿಲಾತನು ಅವರಿಗೆ,
ಏಕೆ? ಇವನೇನು ಮಾಡಿದ್ದಾನೆ?,”
ಎಂದು ಪ್ರಶ್ನಿಸಲು ಅವರು,
ಅವನನ್ನು ಶಿಲುಬೆಗೇರಿಸು
ಎಂದು ಮತ್ತಷ್ಟು ಆರ್ಭಟಿಸಿದರು. 15ಪಿಲಾತನು ಜನರನ್ನು ತೃಪ್ತಿಪಡಿಸಲು ಬರಬ್ಬನನ್ನು ಬರಬ್ಬನನ್ನು ಬಿಡುಗಡೆ ಮಾಡಿಸಿ, ಯೇಸುವನ್ನು ಕೊರಡೆಗಳಿಂದ ಹೊಡಿಸಿ ಶಿಲುಬೆಗೆ ಹಾಕಿಸಲು ಒಪ್ಪಿಸಿದನು.

ಪರಿಹಾಸ್ಯಕ್ಕೆ ಗುರಿಯಾದ ಯೇಸು
(ಮತ್ತಾಯ 27:27-31; ಯೊವಾನ್ನ 19:2-3)

16ಅನಂತರ ಸೈನಿಕರು ಯೇಸುವನ್ನು ರಾಜಭವನ ಅಂಗಣದೊಳಕ್ಕೆ ಕರೆದುಕೊಂಡು ಹೋಗಿ, ತಮ್ಮ ಪಡೆಯನ್ನು ಒಟ್ಟಿಗೆ ಸೇರಿಸಿ 17ಯೇಸುವಿಗೆ ನಸುಗೆಂಪು ಬಣ್ಣದ ಮೇಲಂಗಿಯನ್ನು ಹೊದಿಸಿದರು. ಮುಳ್ಳಿನ ಕಿರೀಟವೊಂದನ್ನು ಹೆಣೆದು ಯೇಸುವಿನ ತಲೆಯ ಮೇಲೆ ಇರಿಸಿ
18ಯೆಹೂದ್ಯರ ಅರಸನಿಗೆ ಜಯವಾಗಲಿ,
ಎಂದು ನಾಟಕೀಯವಾಗಿ ವಂದಿಸಿದರು. 19ಬೆತ್ತದಿಂದ ಅವರ ತಲೆಯ ಮೇಲೆ ಹೊಡೆದು, ಉಗುಳಿ ಮೊಣಕಾಲೂರಿ ವಂದಿಸುವಂತೆ ನಟಿಸಿದರು. 20ಹೀಗೆ ಯೇಸುವನ್ನು ಪರಿಹಾಸ್ಯಮಾಡಿದ ಬಳಿಕ ನಸುಗೆಂಪು ಬಣ್ಣದ ಮೇಲ್ವಸ್ತ್ರವನ್ನುತೆಗೆದುಹಾಕಿ ಅವರ ಬಟ್ಟೆಗಳನ್ನೇ ಮತ್ತೆ ತೊಡಿಸಿದರು. ಬಳಿಕ ಶಿಲುಬೆಗೇರಿಸಲು ಅವರನ್ನು ಕರೆದೊಯ್ದರು.


ಗೊಲ್ಗೊಥದಲ್ಲಿ ಶಿಲುಬೆ
(ಮತ್ತಾಯ 27:32-44; ಲೂಕ 23:26-43; ಯೊವಾನ್ನ 19:17-27)

21ಆಗ ಸಿರೇನ್ಯ ಪಟ್ಟಣದ ಸಿಮೋನ ಎಂಬವನು ಹಳ್ಳಿಯ ಕಡೆಯಿಂದ ಮಾರ್ಗವಾಗಿ ಬರುತ್ತಿದ್ದನು. ಈತನು ಅಲೆಕ್ಸಾಂಡರ್ಹಾಗೂ ರೂಫ ಎಂಬುವವರ ತಂದೆ. ಯೇಸುವಿನ ಶಿಲುಬೆಯನ್ನು ಹೊರುವಂತೆ ಸೈನಿಕರು ಅವನನ್ನು ಬಲವಂತ ಮಾಡಿದರು. 22ಬಳಿಕಗೊಲ್ಗೊಥಾಅಂದರೆಕಪಾಲ ಸ್ಥಳಎಂಬರ್ಥದ ಸ್ಥಳಕ್ಕೆ ಅವರು ಯೇಸುವನ್ನು ಕರೆದುಕೊಂಡು ಬಂದರು. 23ಯೇಸುವಿಗೆ ಅಲ್ಲಿ ರಕ್ತಬೋಳ ಬೆರಸಿದ ದ್ರಾಕ್ಷಾರಸವನ್ನು ಕುಡಿಯಲು ಕೊಡಲಾಯಿತು. ಆದರೆ ಯೇಸುವು ಅದನ್ನು ಸ್ವೀಕರಿಸಲಿಲ್ಲ. 24ಕೊನೆಗೆ ಅವರು ಯೇಸುವನ್ನು ಶಿಲುಬೆಗೆ ಹಾಕಿ,ಬಳಿಕ ಪ್ರತಿಯೊಬ್ಬನು ಯೇಸುವಿನ ಬಟ್ಟೆಗಳನ್ನು ಹಂಚಿಕೊಳ್ಳುವುದಕ್ಕಾಗಿ ಚೀಟು ಹಾಕಿ ಅವುಗಳನ್ನು ಪಾಲುಮಾಡಿಕೊಂಡರು. 25ಯೇಸುವನ್ನು ಶಿಲುಬೆಗೆ ಏರಿಸಿದಾಗ ಮೂರನೆಯ ತಾಸಾಗಿತ್ತು. 26ಯೇಸುವಿನ ಮೇಲೆ ಹೊರಿಸಲ್ಪಟ್ಟ ಆಪಾದನೆಯಂತೆ, ‘ಈತ ಯೆಹೂದ್ಯರ ಅರಸಎಂಬ ಫಲಕವನ್ನು ಹಾಕಲಾಯಿತು. 27ಯೇಸುವಿನೊಂದಿಗೆ ಇಬ್ಬರು ಕಳ್ಳರನ್ನು ಅವರ ಅಕ್ಕಪಕ್ಕದಲ್ಲೇ ಶಿಲುಬೆಗೆ ಏರಿಸಲಾಯಿತು. 28ಹೀಗೆಆತನು ಅಪರಾಧಿಗಳ ಸಾಲಿಗೆ ಸೇರಿಸಲ್ಪಟ್ಟನುಎಂಬ ಪವಿತ್ರಗ್ರಂಥದ ವಾಕ್ಯವು ನೆರವೇರಿತು. 29ಪಕ್ಕದಲ್ಲಿ ಹಾದುಹೋಗುತ್ತಿದ್ದವರು ತಮ್ಮ ತಲೆಗಳನ್ನಾಲ್ಲಾಡಿಸುತ್ತಾ,
ಆಹಾ! ದೇವಾಲಯವನ್ನು ಕೆಡವಿ ಮೂರೇ ದಿನಗಳಲ್ಲಿ ಅದನ್ನು ಕಟ್ಟುವವನೇ, 30ನಿನ್ನನ್ನು ನೀನೇ ರಕ್ಷಿಸಿಕೊಂಡು ಶಿಲುಬೆಯಿಂದ ಕೆಳಗಿಳಿದು ಬಾ
ಎಂದು ಹೇಳಿ ಯೇಸುವನ್ನು ನಿಂದಿಸಿದರು. 31ಅದೇ ಪ್ರಕಾರ ಪ್ರಧಾನ ಯಾಜಕರೂ ಸಹ ಧರ್ಮಶಾಸ್ತ್ರಿಗಳೊಂದಿಗೆ ಸೇರಿ ಯೇಸುವನ್ನು ಅಪಹಾಸ್ಯಗೈದು,
ಇತರರನ್ನು ರಕ್ಷಿಸಿದ ಈತನು; ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರದೇ ಹೋದನು. 32ಇಸ್ರಾಯೇಲರ ಅರಸನಾದ ಕ್ರಿಸ್ತನು ಶಿಲುಬೆಯಿಂದ ಇಳಿದು ಬರಲಿ; ಆಗ ನಾವು ನೋಡಿ ನಂಬುತ್ತೇವೆ
ಎಂದು ತಮ್ಮತಮ್ಮಲ್ಲೇ ಅಂದುಕೊಂಡರು;ಯೇಸುವಿನೊಂದಿಗೆ ಶಿಲುಬೆಗೆ ಹಾಕಲ್ಪಟ್ಟವರೂ ಅದೇ ರೀತಿಯಲ್ಲಿ ಯೇಸುವನ್ನು ಹಂಗಿಸಿದರು.

ಪ್ರಾಣಾರ್ಪಣೆ
(ಮತ್ತಾಯ 27:45-56; ಲೂಕ 23:44-49; ಯೊವಾನ್ನ 19:28-30)

33ಆರನೇ ತಾಸಿನಿಂದ ಒಂಭತ್ತನೇ ತಾಸಿನವರೆಗೆ ದೇಶದ ಮೇಲೆಲ್ಲಾ ಕತ್ತಲೆ ಕವಿದಿತ್ತು.
34ಒಂಭತ್ತನೆಯ ತಾಸಿನಲ್ಲಿ ಯೇಸುವು,
ಎಲೋಹಿ, ಎಲೋಹಿ, ಲಮಾ ಸಬಕ್ತಾನೀ?”
ಅಂದರೆನನ್ನ ದೇವರೇ, ನನ್ನ ದೇವರೇ, ನನ್ನನ್ನೇಕೆಕೈಬಿಟ್ಟಿದ್ದೀರಿಎಂದು ಮಹಾಧ್ವನಿಯಿಂದ ಕೂಗಿದರು. 35ಹತ್ತಿರದಲ್ಲಿ ನಿಂತಿದ್ದವರಲ್ಲಿ ಕೆಲವರು ಅದನ್ನು ಕೇಳಿ,
ಇದೋ, ಇವನು ಎಲೀಯನನ್ನು ಕರೆಯುತ್ತಿದ್ದಾನೆ
ಎಂದರು. 36ಆಗ ಅವರಲ್ಲೊಬ್ಬನು ಓಡಿ ಹೋಗಿ ಸ್ಪಂಜನ್ನು ಹುಳಿರಸದಲ್ಲಿ ತೋಯಿಸಿ ಅದನ್ನು ಒಂದು ಕೋಲಿನ ತುದಿಗೆ ಸಿಕ್ಕಿಸಿಯೇಸುವಿಗೆ ಕುಡಿಯಲು ಕೊಡುತ್ತಾ,
ತಾಳಿ, ಇವನನ್ನು ಶಿಲುಬೆಯಿಂದ ಇಳಿಸಲು ಎಲೀಯನು ಬರುವನೋ ನೋಡೋಣ
ಎಂದನು. 37ಆದರೆ ಯೇಸುವು ಗಟ್ಟಿಯಾಗಿ ಕೂಗಿ ಪ್ರಾಣಬಿಟ್ಟರು. 38ಆಗ ಪ್ರಧಾನ ದೇವಾಲಯದ ತೆರೆಯು ಮೇಲಿನಿಂದ ಕೆಳಗಿನವರೆಗೂ ಇಬ್ಬಾಗವಾಗಿ ಸೀಳಿಹೋಯಿತು39ಯೇಸುವು ಹೀಗೆ ಕೂಗಿ ಪ್ರಾಣ ಬಿಟ್ಟಿದ್ದನ್ನು ಎದುರು ನಿಂತು ನೋಡುತ್ತಿದ್ದ ಶತಾಧಿಪತಿಯು,
ನಿಜವಾಗಿಯೂ ಮನುಷ್ಯ ದೇವಪುತ್ರ!”
ಎಂದನು. 40ಇದನ್ನು ದೂರದಲ್ಲಿ ನಿಂತು ನೋಡುತ್ತಿದ್ದ ಸ್ತ್ರೀಯರಲ್ಲಿ ಮಗ್ದಲದ ಮರಿಯ, ಚಿಕ್ಕ ಯಕೋಬ ಮತ್ತು ಯೋಸೆಯ ತಾಯಿ ಮರಿಯ ಹಾಗೂ ಸಲೋಮೆ ಸಹ ಇದ್ದರು. 41ಯೇಸು ಗಲಿಲೇಯದಲ್ಲಿದ್ದಾಗ ಇವರು ಯೇಸುವನ್ನು ಹಿಂಬಾಲಿಸಿ ಉಪಚರಿಸಿದ್ದರು. ಯೇಸುವಿನೊಂದಿಗೆ ಜೆರುಸಲೇಮಿಗೆ ಬಂದಿದ್ದ ಇನ್ನೂ ಅನೇಕ ಸ್ತ್ರೀಯರು ಅಲ್ಲಿದ್ದರು.

ಯೇಸುವಿನ ಶವಸಂಸ್ಕಾರ
(ಮತ್ತಾಯ 27:57-61; ಲೂಕ 23:50-54; ಯೊವಾನ್ನ 19:38-42)

42ಆಗ ಸಂಜೆಯಾಗಿತ್ತು; ಅದು ಸಬ್ಬತ್ತಿನ ಹಿಂದಿನ ಸಿದ್ಧತೆಯ ದಿನವಾಗಿತ್ತು. 43ಆದುದರಿಂದ ಅರಿಮತಾಯ ಎಂಬ ಊರಿನ ಜೋಸೆಫನು ಧೈರ್ಯ ತಂದುಕೊಂಡು ಪಿಲಾತನ ಸನ್ನಿಧಿಗೆ ತೆರಳಿ ಯೇಸುವಿನ ಪಾರ್ಥೀವ ಶರೀರವನ್ನು ತನಗೆ ಕೊಡಿಸಬೇಕೆಂದು ಬೇಡಿಕೊಂಡನು. ದೇವರಸಾಮ್ರಾಜ್ಯದ ಆಗಮನಕ್ಕಾಗಿ ಕಾಯುತ್ತಿದ್ದ ಈತನು ಯೆಹೂದ್ಯರ ನ್ಯಾಯಸಭೆಯ ಸನ್ಮಾನಿತ ಸದಸ್ಯನಾಗಿದ್ದನು. 44ಯೇಸು ಇಷ್ಟು ಬೇಗ ಸತ್ತಿದ್ದನ್ನು ಕೇಳಿ ಪಿಲಾತನಿಗೆ ಆಶ್ಚರ್ಯವಾಯಿತು. ಅವನು ಶತಾಧಿಪತಿಯನ್ನು ಕರೆಯಿಸಿ,
ಯೇಸು ಮೃತನಾಗಿ ಎಷ್ಟು ಸಮಯವಾಯಿತು,”

ಎಂದು ವಿಚಾರಿಸಿದನು. 45ಯೇಸು ಸತ್ತಿರುವ ವಿಷಯವನ್ನು ಶತಾಧಿಪತಿಯಿಂದ ಅರಿತ ಮೇಲೆ ಶರೀರವನ್ನು ಜೋಸೆಫನಿಗೆ ಕೊಡಿಸಿದನು. 46ಜೋಸೆಫನು ಶುಭ್ರವಾದ ನಾರು ಮಡಿಯನ್ನು ಕೊಂಡು ತಂದು ಯೇಸುವನ್ನು ಶಿಲುಬೆಯಿಂದ ಇಳಿಸಿ ನಾರುಮಡಿಯಲ್ಲಿ ಸುತ್ತಿ ಬಂಡೆಯಲ್ಲಿಕೊರೆಸಿದ್ದ ಸಮಾಧಿಯಲ್ಲಿಟ್ಟು ಸಮಾಧಿಯ ಬಾಗಲಿಗೆ ಒಂದು ಕಲ್ಲನ್ನು ಉರುಳಿಸಿದನು. 47ಮಗ್ದಲದ ಮರಿಯಳೂ, ಯೋಸೆಯ ತಾಯಿಯಾದ ಮರಿಯಳೂ ಯೇಸುವನ್ನು ಇರಿಸಿದ್ದ ಸಮಾಧಿ ಸ್ಥಳವನ್ನು ಗುರುತಿಸಿಕೊಂಡರು.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ