ಅಧ್ಯಾಯ 13

ಮಾರ್ಕನು ಬರೆದ ಸುಸಂದೇಶಗಳು



ದೇವಾಲಯದ ವಿನಾಶದ ಮುನ್ಸೂಚನೆ
(ಮತ್ತಾಯ 24:1-2; ಲೂಕ 21:5-6)

1ಯೇಸುವು ದೇವಾಲಯದೊಳಗಿನಿಂದ ಹೊರಬರುತ್ತಿದ್ದಾಗ ಅವರ ಶಿಷ್ಯರಲ್ಲಿ ಒಬ್ಬನು ಅವರಿಗೆ,
"ಬೋಧಕರೇ, ಇಲ್ಲಿ ನೋಡಿ, ಎಂಥಾ ಭಾರಿ ಕಲ್ಲುಗಳು! ಎಂಥಾ ಕಟ್ಟಡಗಳು!"
ಎಂದನು. 2ಯೇಸುವು ಅವನಿಗೆ ಪ್ರತ್ಯುತ್ತರವಾಗಿ,
"ನೀನಿಲ್ಲಿ ದೊಡ್ಡ ಕಟ್ಟಡಗಳನ್ನು ನೋಡುತ್ತಿರುವೆಯಲ್ಲಾ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವುದಿಲ್ಲ. ಎಲ್ಲವನ್ನೂ ಕೆಡವಿಹಾಕುವರು,"
 ಎಂದರು.

ಸೈರಣೆಯಿಂದ ರಕ್ಷಣೆ
(ಮತ್ತಾಯ 24:3-8; ಲೂಕ 21:7-11)
         3ಯೇಸುವು ಎಣ್ಣೆ ಮರಗಳ ಗುಡ್ಡದ ಮೇಲೆ ದೇವಾಲಯಕ್ಕೆ ಎದುರಾಗಿ ಕುಳಿತುಕೊಂಡಿದ್ದರು. ಆಗ ಪೇತ್ರ, ಯಕೋಬ, ಯೊವಾನ್ನ, ಅಂದ್ರೆಯ ಇವರುಗಳು ಪ್ರತ್ಯೇಕವಾಗಿಯೇಸುವನ್ನು ಕಂಡು ಅವರಿಗೆ,
4ಇವೆಲ್ಲಾ ಯಾವಾಗ ಸಂಭವಿಸುವುವು? ಇವೆಲ್ಲವುಗಳು ನೆರವೇರುವದಕ್ಕೆ ಯಾವ ಮುನ್ಸೂಚನೆ ಇದೆ? ನಮಗೆ ತಿಳಿಸಿ
ಎಂದು ಕೇಳಿಕೊಂಡರು. 5ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ,
ಯಾರಾದರೂ ನಿಮ್ಮನ್ನು ಮೋಸಗೊಳಿಸದಂತೆ ಎಚ್ಚರಿಕೆಯಿಂದಿರಿ6ಏಕೆಂದರೆ ಅನೇಕರು ನನ್ನ ಹೆಸರಿನಲ್ಲಿ ಬಂದು, ‘ನಾನೇ ಕ್ರಿಸ್ತನುಎಂದು ಹೇಳಿ ಅನೇಕರನ್ನು ಮೋಸಗೊಳಿಸುವರು. 7ಇದಲ್ಲದೆ ಯುದ್ಧಗಳ ವಿಷಯವನ್ನೂ, ಯುದ್ಧಗಳ ಸುದ್ಧಿಯನ್ನೂ ನೀವು ಕೇಳಿ ಕಳವಳಪಡಬೇಡಿರಿ. ಅವುಗಳು ನಡೆಯುವುದುಅಗತ್ಯ; ಆದರೆ ಅದೇ ಅಂತ್ಯವಲ್ಲ. 8ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಷ್ಟ್ರಕ್ಕೆ ವಿರೋಧವಾಗಿ ರಾಷ್ಟ್ರವೂ ದಂಗೆ ಏಳುವುವು; ಹಲವು ಕಡೆಗಳಲ್ಲಿ ಭೂಕಂಪಗಳಾಗುವುವು.ಇದಲ್ಲದೆ ಬರಗಾಲಗಳು, ಕ್ಷಾಮಡಾಮರಗಳು ತಲೆದೋರುವುವು. ಇವೆಲ್ಲವೂ ಪ್ರಸವ ಕಾಲದ ಪ್ರಾರಂಭ ಮಾತ್ರ. 9ನೀವು ನಿಮ್ಮ ವಿಷಯದಲ್ಲಿ ಎಚ್ಚರಿಕೆಯಿಂದಿರಿ; ನಿಮ್ಮನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಒಪ್ಪಿಸುವರು; ಪ್ರಾರ್ಥನಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು; ನನ್ನನಿಮಿತ್ತ ನೀವು ಅಧಿಕಾರಿಗಳ ಮತ್ತು ಅರಸರ ಮುಂದೆ ನಿಲ್ಲಬೇಕಾಗುವುದು. ಅವರ ಮುಂದೆ ನೀವು ನನಗೆ ಸಾಕ್ಷಿಗಳಾಗುವಿರಿ. 10ಸುವಾರ್ತೆಯನ್ನು ಮೊದಲು ಎಲ್ಲಾ ಜನಾಂಗಗಳಿಗೆಸಾರುವುದು ಅಗತ್ಯವಾಗಿದೆ. 11ನಿಮ್ಮನ್ನು ಬಂಧಿಸಿ ತೆಗೆದುಕೊಂಡು ಹೋಗುವಾಗ ನೀವು ಏನು ಮಾತನಾಡಬೇಕೆಂಬುದನ್ನು ಮುಂಚಿತವಾಗಿ ಚಿಂತಿಸಬೇಡಿರಿ, ಆಲೋಚಿಸಲೂಬೇಡಿರಿ; ಆದರೆ ಗಳಿಗೆಯಲ್ಲಿ ನಿಮಗೆ ಅನುಗ್ರಹಿಸಲಾಗಿರುವ ಮಾತುಗಳನ್ನೇ ನುಡಿಯಿರಿ; ಏಕೆಂದರೆ ಮಾತನಾಡುವವರು ನೀವಲ್ಲ; ಪವಿತ್ರಾತ್ಮರೇ. 12ಸಹೋದರನುಸಹೋದರನನ್ನೂ, ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು; ಮಕ್ಕಳು ತಮ್ಮ ತಂದೆತಾಯಿಗಳ ವಿರುದ್ಧವಾಗಿ ನಿಂತು ಅವರನ್ನು ಕೊಲ್ಲಿಸಲು ಕಾರಣರಾಗುವರು. 13ನನ್ನಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮೊಂದಿಗೆ ಹಗೆತನ ಮಾಡುವರು. ಆದರೆ ಕಡೆಯವರೆಗೂ ತಾಳುವವನೇ ರಕ್ಷಣೆ ಹೊಂದುವನು
14ಪ್ರವಾದಿಯಾದ ದಾನಿಯೇಲನು ಹೇಳಿದಂತೆ ಹಾಳು ಮಾಡುವ ಅಸಹ್ಯವು ನಿಲ್ಲಬಾರದ ಸ್ಥಳದಲ್ಲಿ ನಿಂತಿರುವುದನ್ನು ನೀವು ಕಾಣುವಾಗ (ಓದುವವನು ತಿಳಿದುಕೊಳ್ಳಲಿ)ಜುದೇಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಲಿ. 15ಮನೆಯ ಮಾಳಿಗೆಯ ಮೇಲಿದ್ದವನು ಕೆಳಕ್ಕೆ ಇಳಿಯಲಿ; ಮನೆಯಿಂದ ಏನನ್ನೂ ತೆಗೆದುಕೊಳ್ಳಲು ಯತ್ನಿಸದೆ ಓಡಿಹೋಗಲಿ. 16ಹೊಲದಲ್ಲಿರುವವನು ಮತ್ತೆ ತನ್ನ ಹೊದಿಕೆಯನ್ನು ತೆಗೆದುಕೊಳ್ಳಲು ಹಿಂದಿರುಗದಿರಲಿ. 17ಆದರೆ ಅಯ್ಯೋ! ದಿನಗಳಲ್ಲಿ ಗರ್ಭಿಣಿಯರ ಮತ್ತು ಹಾಲೂಡಿಸುವ ತಾಯಿಂದಿರ ಗೋಳೇನು? 18 ಸಂಕಷ್ಟಗಳು ಚಳಿಗಾಲದಲ್ಲಿ ಆಗದಂತೆ ನೀವು ಪ್ರಾರ್ಥಿಸಿರಿ. 19ಆಗ ಬರಲಿರುವ ಸಂಕಷ್ಟಗಳು ದೈವ ಸೃಷ್ಟಿಯ ಆದಿಯಿಂದ ಇರಲಿಲ್ಲ. ಇನ್ನು ಮುಂದಕ್ಕೂ ಇರುವುದಿಲ್ಲ. 20ಕರ್ತನು ದಿನಗಳ ಅವಧಿಯನ್ನು ಕಡಿಮೆ ಮಾಡದಿದ್ದರೆ ಯಾವ ಮಾನವನೂ ರಕ್ಷಣೆ ಹೊಂದುವದಿಲ್ಲ. ಆದರೆ ತಾವು ಆರಿಸಿದವರಿಗಾಗಿ ದಿನಗಳ ಅವಧಿಯನ್ನು ಕಡಿಮೆ ಮಾಡಿದ್ದಾರೆ. 21ಆಗ ಯಾರಾದರೂ ನಿಮಗೆ, ‘ಇದೋ, ಕ್ರಿಸ್ತನು ಇಲ್ಲಿದ್ದಾನೆ; ಅದೋ, ಕ್ರಿಸ್ತನು ಅಲ್ಲಿದ್ದಾನೆಎಂದು ಹೇಳಿದರೆ ಅವರನ್ನು ನಂಬಬೇಡಿರಿ; 22ಸುಳ್ಳುಕ್ರಿಸ್ತರೂ, ಸುಳ್ಳುಪ್ರವಾದಿಗಳೂ ಎದ್ದು ಆರಿಸಲ್ಪಟ್ಟವರನ್ನೂ ಮೋಸಗೊಳಿಸುವುದಕ್ಕಾಗಿ ಸೂಚಕಕಾರ್ಯಗಳನ್ನೂ, ಅದ್ಭುತ ಕಾರ್ಯಗಳನ್ನೂ ಮಾಡಿ ತೋರಿಸುವರು. 23ಆದರೆ ನೀವುಎಚ್ಚರಿಕೆಯಿಂದಿರಿ. ನಾನು ನಿಮಗೆ ಎಲ್ಲವುಗಳನ್ನೂ ಮುಂಚಿತವಾಗಿಯೇ ಹೇಳಿದ್ದೇನೆ.”

ನರಪುತ್ರನ ಪುನರಾಗಮನ
(ಮತ್ತಾಯ 24:29-31; ಲೂಕ 21:25-28)

24 ದಿನಗಳಲ್ಲಿ ಸಂಕಷ್ಟಗಳು ತೀರಿದ ನಂತರ ಸೂರ್ಯನು ಅಂಧಕಾರಮಯನಾಗುವನು; ಚಂದ್ರನು ಕಾಂತಿಹೀನನಾಗುವನು. 25ಆಕಾಶದ ನಕ್ಷತ್ರಗಳು ಬೀಳುವವುಮತ್ತು ಗ್ರಹಶಕ್ತಿಗಳು ಕಂಪಿಸುವುವು. 26ಆಗ ನರಪುತ್ರನು ಮಹಾಶಕ್ತಿಯಿಂದಲೂ, ಮಹಿಮೆಯಿಂದಲೂ ಮೇಘಗಳಲ್ಲಿ ಬರುವುದನ್ನು ಜನರು ಕಾಣುವರು. 27ಆತನು ತನ್ನದೇವದೂತರನ್ನು ನಾಲ್ಕೂ ದಿಕ್ಕುಗಳಿಗೆ ಕಳುಹಿಸಿ ಭೂಮಿಯ ಕಟ್ಟಕಡೆಯಿಂದ ಆಕಾಶದ ಕಟ್ಟಕಡೆಯವರೆಗೆ ತಾನು ಆರಿಸಿಕೊಂಡವರನ್ನು ಒಟ್ಟುಗೂಡಿಸುವನು.”

ಅಂಜೂರ ಮರದಿಂದ ಪಾಠ
(ಮತ್ತಾಯ 24:32-35; ಲೂಕ 21:29-33)

28ಅಂಜೂರದ ಮರದಿಂದ ಒಂದು ಪಾಠವನ್ನು ಕಲಿತುಕೊಳ್ಳಿರಿ; ಅದರ ಎಳೆರಂಬೆಗಳಲ್ಲಿ ಎಲೆಗಳು ಚಿಗುರುವಾಗ ಬೇಸಿಗೆಯು ಹತ್ತಿರವಾಯಿತೆಂದು ನೀವುಅರಿತುಕೊಳ್ಳುತ್ತೀರಿ; 29ಅದೇ ಪ್ರಕಾರ ಇವುಗಳು ಸಂಭವಿಸುವುದನ್ನು ಕಂಡಾಗ  ಹೊಸ್ತಿಲಲ್ಲೇ ಇದ್ದಾನೆಂದು ತಿಳಿದುಕೊಳ್ಳಿರಿ. 30ಇವೆಲ್ಲವುಗಳು ನೆರವೇರುವವರೆಗೆ ಸಂತತಿಯುಅಳಿದು ಹೋಗುವುದೇ ಇಲ್ಲ ಎಂದು ನಾನು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. 31ಆಕಾಶವೂ ಭೂಮಿಯೂ ಅಳಿದು ಹೋಗುವವು; ಆದರೆ ನನ್ನ ಮಾತುಗಳು ಅಳಿದು ಹೋಗುವುದೇಇಲ್ಲ.”

ಅನಿರೀಕ್ಷಿತ ಆಗಮನಕ್ಕೆ ಅಣಿಯಾಗಿರಿ
(ಮತ್ತಾಯ 24:36-44)


32 “ ದಿನವಾಗಲಿ, ಗಳಿಗೆಯಾಗಲಿ ಯಾವಾಗ ಬರುವುದೆಂದು ಪಿತನ ಹೊರತು ಮತ್ತಾರೂ ಅರಿಯರು. ಸ್ವರ್ಗದಲ್ಲಿರುವ ದೂತರೇ ಆಗಲಿ, ಪುತ್ರನೇ ಆಗಲಿ ಅದನ್ನು ಅರಿಯರು. 33 ಕಾಲ ಯಾವಾಗ ಬರುವುದೆಂದು ನಿಮಗೆ ತಿಳಿಯದೆ ಇರುವ ಕಾರಣ ಎಚ್ಚರಿಕೆಯಿಂದಿರಿ, ಜಾಗರೂಕರಾಗಿರಿ, 34ಯಜಮಾನನೊಬ್ಬನು ದೂರದ ಪ್ರಯಾಣವನ್ನುಕೈಗೊಂಡು ತನ್ನ ಮನೆಯನ್ನು ಬಿಟ್ಟು ಹೋಗುವಾಗ  ತನ್ನ ಸೇವಕರಲ್ಲಿ ಪ್ರತಿಯೊಬ್ಬನಿಗೂ ಅವರವರಿಗೆ ತಕ್ಕ ಜವಾಬ್ದಾರಿಯನ್ನು ವಹಿಸಿ ಕೊಟ್ಟು, ಬಾಗಿಲು ಕಾಯುವವನಿಗೆಜಾಗರೂಕನಾಗಿ ನೋಡಿಕೊಳ್ಳಬೇಕೆಂದು ಆಜ್ಞಾಪಿಸುವ ರೀತಿಯಲ್ಲಿ ನಾನು ನಿಮಗೆ ಹೇಳುತ್ತಿದ್ದೇನೆ. ಎಚ್ಚರವಾಗಿರಿ; 35ಮನೆಯ ಯಜಮಾನನು ಸಂಜೆಯಲ್ಲೋ,ಸರಿಹೊತ್ತಿನಲ್ಲೋ, ಕೋಳಿ ಕೂಗುವಾಗಲೋ, ಬೆಳಕು ಹರಿಯುವಾಗಲೋ ಯಾವಾಗ ಬರುವನೆಂದು ನಿಮಗೆ ತಿಳಿಯದು. 36ಅನಿರೀಕ್ಷಿತವಾಗಿ ಆತನು ಬಂದು ನೀವುನಿದ್ರಿಸುವುದನ್ನು ಕಾಣಬಹುದು. 37ನಿಮಗೆ ಹೇಳುವುದನ್ನೇ ನಾನು ಎಲ್ಲರಿಗೂ ಹೇಳುತ್ತೇನೆ; ಎಚ್ಚರವಾಗಿರಿ,”  ಎಂದರು.

                                                                                                                                                                                                                                                               


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ