ಮಾರ್ಕನು ಬರೆದ ಸುಸಂದೇಶಗಳು
ಗೇಣಿದಾರರ ಕೃತಘ್ನತೆ
(ಮತ್ತಾಯ 21:33-46; ಲೂಕ
20:9-19)
1ಇದಾದ
ಬಳಿಕ ಯೇಸುವು ಸಾಮತಿಗಳ ರೂಪದಲ್ಲಿ
ಮಾತನಾಡಲು ಪ್ರಾರಂಭಿಸಿದರು:
“ಒಬ್ಬನು
ಒಂದು ದ್ರಾಕ್ಷಿಯ ತೋಟವನ್ನು ಮಾಡಿ ಸುತ್ತಲೂ ಬೇಲಿಯನ್ನು
ಹಾಕಿಸಿದ್ರಾಕ್ಷಿಯ ರಸವನ್ನು ತೆಗೆಯಲು ಅಲೆಯನ್ನು
ಮಾಡಿ ಕಾವಲುಗೋಪುರವನ್ನು ಕಟ್ಟಿಸಿ ಅದನ್ನು ಗೇಣಿದಾರರಿಗೆ
ವಹಿಸಿ ಹೊರದೇಶಕ್ಕೆ ಹೊರಟುಹೋದನು. 2ಫಲವನ್ನು
ಕೊಡುವಕಾಲವು ಬಂದಾಗ ಅವನು ದ್ರಾಕ್ಷಿತೋಟದ
ಫಲದ ಪಾಲನ್ನು ಪಡೆಯುವುದಕ್ಕಾಗಿ ಗೇಣಿದಾರರ
ಬಳಿಗೆ ಒಬ್ಬ ಸೇವಕನನ್ನು ಕಳುಹಿಸಿದನು.
3ಅವರು
ಅವನನ್ನು ಹಿಡಿದು ಹೊಡೆದುಬರಿಗೈಯಲ್ಲಿ ಕಳುಹಿಸಿ
ಬಿಟ್ಟರು. 4ಪುನಃ
ಯಜಮಾನನು ಮತ್ತೊಬ್ಬ ಸೇವಕನನ್ನು ಅವರ ಬಳಿಗೆ ಕಳುಹಿಸಿದಾಗ
ಅವರು ಅವನ ತಲೆಯ ಮೇಲೆ
ಕಲ್ಲುಗಳನ್ನು ಎಸೆದು ಗಾಯಪಡಿಸಿಅಪಮಾನಮಾಡಿ ಕಳುಹಿಸಿಬಿಟ್ಟರು.
5ಅವನು
ಇನ್ನೂ ಅನೇಕರನ್ನು ಕಳುಹಿಸಿದನು. ಗೇಣಿದಾರರು ಅವರಲ್ಲಿ ಕೆಲವರನ್ನು ಹೊಡೆದರು;
ಕೆಲವರನ್ನು ಕೊಂದು ಹಾಕಿದರು. 6ಕಡೆಯದಾಗಿಅಲ್ಲಿಗೆ ಕಳುಹಿಸಲು ಉಳಿದದ್ದು ಯಜಮಾನನ ಅತಿ ಪ್ರಿಯನಾಗಿದ್ದ
ಒಬ್ಬನೇ ಮಗನು; ಅವರು ತಮ್ಮ
ಮಗನಿಗೆ ಗೌರವ ಸಲ್ಲಿಸುವರು ಎಂದು
ಭಾವಿಸಿದ ಯಜಮಾನನು ಅವನನ್ನು ಸಹಅವರ
ಬಳಿಗೆ ಕಳುಹಿಸಿದನು. 7ಆದರೆ
ಆ ಗೇಣಿದಾರರು, “ಇವನೇ
ಈ ತೋಟದ ಉತ್ತರಾಧಿಕಾರಿ;
ಬನ್ನಿ, ಇವನನ್ನು ಕೊಂದುಹಾಕೋಣ; ಆಗ
ತೋಟವು ನಮ್ಮದಾಗುವುದು,” ಎಂದು ತಮ್ಮತಮ್ಮಲ್ಲಿಯೇ ಮಾತನಾಡಿಕೊಂಡು,
8ಅವನನ್ನು
ಹಿಡಿದು ಕೊಂದು ಹಾಕಿ ದ್ರಾಕ್ಷಿಯ
ತೋಟದ ಹೊರಕ್ಕೆ ಬಿಸಾಡಿದರು. 9ಪರಿಸ್ಥಿತಿಯು ಹೀಗಿರುವಾಗ ದ್ರಾಕ್ಷಿಯ ತೋಟದ ಯಜಮಾನನು ಏನು
ಮಾಡಬಹುದು? ಅವನು ಬಂದು ಆ
ಗೇಣಿದಾರರನ್ನು ಸಂಹರಿಸಿ ದ್ರಾಕ್ಷಿಯ ತೋಟವನ್ನು
ಬೇರೆಯವರಿಗೆ ವಹಿಸಿಕೊಡುವನು.
ಧರ್ಮಶಾಸ್ತ್ರದಲ್ಲಿ;
10‘ಮನೆಯನ್ನು
ಕಟ್ಟುವವರು
ತಿರಸ್ಕರಿಸಿಹ
ಕಲ್ಲು
ಅದು
ಆಯಿತು ಪ್ರಮುಖ ಮೂಲೆಗಲ್ಲು.
11ಸರ್ವೇಶ್ವರನಿಂದಲೆ
ಆದ
ಈ
ಕಾರ್ಯವು,
ಮೂಡಿಸಿಹುದು
ಆಶ್ಚರ್ಯವೆಮ್ಮ
ಕಂಗಳಿಗೆ,'
ಎಂಬ ಈ ಬರಹವನ್ನು ನೀವು
ಓದಲಿಲ್ಲವೇ?"
ಎಂದರು.
12ಆಗ ಫರಿಸಾಯರು, ಆತನು
ತಮ್ಮ ಕುರಿತಾಗಿಯೇ ಈ ಸಾಮತಿಯನ್ನು ಹೇಳಿದರೆಂದು
ಅರ್ಥಮಾಡಿಕೊಂಡು ಯೇಸುವನ್ನು ಹಿಡಿದು ಬಂಧಿಸುವ ಸಂದರ್ಭಕ್ಕಾಗಿ ಕಾದರು.
ಆದರೆ ಅಲ್ಲಿ ಸೇರಿದ್ದ ಜನರಿಗೆ
ಹೆದರಿ ಯೇಸುವನ್ನು ಬಿಟ್ಟು ಹೋದರು.
ಮಾತಿನಲ್ಲಿ ಸಿಲುಕಿಸುವ ಪ್ರಯತ್ನ
(ಮತ್ತಾಯ 22:15-22; ಲೂಕ
20:20-26)
13ಅನಂತರ ಅವರು ಯೇಸುವನ್ನು
ಮಾತಿನಲ್ಲಿ ಸಿಲುಕಿಸಿ ಹಿಡಿಯಬೇಕೆಂದು ನಿರ್ಧರಿಸಿ ಕೆಲವು ಫರಿಸಾಯರನ್ನೂ ಹಾಗೂ
ಹೆರೋದನ ಕಡೆಯವರನ್ನು ಯೇಸುವಿನ ಬಳಿಗೆ ಕಳುಹಿಸಿದರು. 14ಅವರು
ಬಂದು ಯೇಸುವಿಗೆ;
"ಬೋಧಕರೇ,
ನೀವು ಸತ್ಯವಂತರೂ, ಯಾರನ್ನೂ ಲಕ್ಷಿಸದವರೂ ಆಗಿದ್ದೀರಿ. ಮನುಷ್ಯರ ಮುಖದಾಕ್ಷಿಣ್ಯ
ಮಾಡದೆ ದೇವರಮಾರ್ಗವನ್ನು ಸತ್ಯಕ್ಕೆಅನುಸಾರವಾಗಿ ಬೋಧಿಸುತ್ತಾ ಇರುವಿರಿ ಎಂಬುದು ನಮಗೆ
ತಿಳಿದಿದೆ; ಹೀಗಿರುವಾಗ ರೋಮ್ ಚಕ್ರಾಧಿಪತಿಯಾದ ಸೆಜಾರನಿಗೆ
ತೆರಿಗೆಯನ್ನು ಕಟ್ಟುವುದು ಧರ್ಮಸಮ್ಮತ ಹೌದೋ ಅಲ್ಲವೋ? 15ನಾವು ಅದನ್ನು ಕೊಡಬೇಕೋ
ಬೇಡವೋ?"
ಎಂದು ಕೇಳಿದರು. ಅವರ ಅಂತರಾಳದಲ್ಲಿ ಏನಿದೆಯೆಂಬುದನ್ನು
ಅರಿತ ಯೇಸುವು ಅವರಿಗೆ,
"ನೀವು
ನನ್ನನ್ನು ಪರೀಕ್ಷಿಸುವುದೇಕೆ? ಒಂದು ನಾಣ್ಯವನ್ನು ತಂದು
ನನಗೆ ತೋರಿಸಿರಿ,"
ಎಂದು ಹೇಳಿದರು. 16ಅವರು
ಅದನ್ನು ತಂದು ಯೇಸುವಿಗೆ ಕೊಟ್ಟಾಗ
ಯೇಸುವು ಅವರಿಗೆ,
"ಇದರ
ಮೇಲಿರುವುದು ಯಾರ ಮುದ್ರೆ? ಇಲ್ಲಿರುವ
ಲಿಪಿ ಯಾರದ್ದು?”
ಎಂದು ಪ್ರಶ್ನಿಸಿದಾಗ, ಅವರು ಯೇಸುವಿಗೆ,
"ಅದು
ಸೆಜಾರನದು,"
ಎಂದು ಉತ್ತರ ಕೊಟ್ಟರು. 17ಆಗ ಯೇಸು ಅವರಿಗೆ ಪ್ರತ್ಯುತ್ತರವಾಗಿ,
"ಸೆಜಾರನಿಗೆ
ಕೊಡಬೇಕಾದುದನ್ನು ಸೆಜಾರನಿಗೂ ದೇವರಿಗೆ ಕೊಡಬೇಕಾದುದನ್ನು ದೇವರಿಗೂ
ಕೊಡಿರಿ,"
ಎಂದು ಹೇಳಿದರು. ಇದನ್ನು ಕೇಳಿದ ಅವರುಯೇಸುವಿನ
ಬಗ್ಗೆ ಆತ್ಯಾಶ್ಚರ್ಯಪಟ್ಟರು.
ಏಳು ಜನ ಸಹೋದರರಲ್ಲಿ ಆಕೆ ಯಾರ ಪತ್ನಿ?
(ಮತ್ತಾಯ 22:23-33; ಲೂಕ
20:27-40)
18ತರುವಾಯ ಸತ್ತನಂತರ ಪುನರುತ್ಥಾನವಿಲ್ಲವೆಂದು
ನಂಬುವ ಸದ್ದುಕಾಯರು ಯೇಸುವಿನ ಬಳಿಗೆ ಬಂದು
ಅವರನ್ನು,
19"ಬೋಧಕರೇ, ‘ಒಬ್ಬನು ತನಗೆ ಮಕ್ಕಳಿಲ್ಲದೆಸತ್ತರೆ
ಅವನ ತಮ್ಮನು ಅಣ್ಣನ ಹೆಂಡತಿಯನ್ನು
ಮದುವೆಯಾಗಿ ತನ್ನ ಅಣ್ಣನಿಗಾಗಿ ಸಂತಾನವನ್ನು
ಪಡೆಯಬೇಕು’ ಎಂದು ಮೋಶೆಯು ನಮಗಾಗಿ
ಬರೆದಿದ್ದಾನಲ್ಲವೇ? 20ಒಮ್ಮೆ
ಏಳುಮಂದಿ ಸಹೋದರರಿದ್ದರು; ಮೊದಲನೆಯವನು ಮದುವೆಯಾಗಿ ಸಂತಾನವಿಲ್ಲದೆ ಸತ್ತಾಗ, 21ಎರಡನೆಯವನು
ಆಕೆಯನ್ನು ಮದುವೆಯಾದನು. ಆದರೆ ಅವನೂ ಸಂತಾನವಿಲ್ಲದೆಸತ್ತನು;
ಅದರಂತೆಯೇ ಮೂರನೆಯವನೂ ಮದುವೆಯಾಗಿ ಸತ್ತನು; 22ಹೀಗೆ
ಏಳು ಮಂದಿಯೂ ಆಕೆಯನ್ನು ಮದುವೆಯಾಗಿ
ಸಂತಾನವಿಲ್ಲದೆ ಸತ್ತರು; ಕೊನೆಗೆ ಆ
ಸ್ತ್ರೀಯೂ ಸಹ ಸತ್ತಳು. 23ಪುನರುತ್ಥಾನರಾಗಿ ಅವರು ಎದ್ದಾಗ ಆ
ಏಳು ಮಂದಿಗೂ ಆಕೆಯು ಹೆಂಡತಿಯಾಗಿದ್ದ
ಕಾರಣಕ್ಕೆ ಈಗ ಆಕೆ ಅವರಲ್ಲಿ
ಯಾರ ಹೆಂಡತಿಯಾಗುವಳು?"
ಎಂದು ಪ್ರಶ್ನಿಸಿದರು.
24ಅದಕ್ಕೆ ಯೇಸು,
"ನೀವು
ದೈವಶಾಸ್ತ್ರವನ್ನೂ, ದೇವರ ಶಕ್ತಿಯನ್ನೂ ತಪ್ಪಾಗಿ
ಅರ್ಥಮಾಡಿಕೊಂಡಿರುವಿರಿ. ಸತ್ತವರು ಪುನರುತ್ಥಾನರಾದ ಬಳಿಕ
ಮದುವೆ ಮಾಡಿಕೊಳ್ಳುವುದೂ ಇಲ್ಲ, ಮಾಡಿಕೊಡುವುದೂ ಇಲ್ಲ.
ಅವರು ಸ್ವರ್ಗದ ದೇವದೂತರಂತೆ ಇರುತ್ತಾರೆ.
26ಅಲ್ಲದೆ ಸತ್ತವರು
ಪುನರುತ್ತಾನರಾಗು ವಿಷಯವಾಗಿ ಹೇಳುವುದಾದರೆ, 'ನಾನು ಅಬ್ರಹಾಮನಿಗೆದೇವರು, ಇಸಾಕನಿಗೆ
ದೇವರು, ಯಕೋಬನಿಗೆ ದೇವರು’ ಎಂದು ದೇವರು
ಮೋಶೆಗೆ ಹೇಳಿದ್ದನ್ನು ಮೋಶೆಯ ಗ್ರಂಥದಲ್ಲಿ ‘ಉರಿಯುವ
ಪೊದೆ’ಯ ಬಗ್ಗೆ ಹೇಳಲಾಗಿರುವ
ಭಾಗದಲ್ಲಿ ನೀವು ಓದಲಿಲ್ಲವೇ? 27ದೇವರು
ಜೀವಂತರ ದೇವರೇ ಹೊರತು ಸತ್ತವರ
ದೇವರಲ್ಲ. ನೀವು ಈ ವಿಷಯವನ್ನು
ತಪ್ಪಾಗಿ ಅರ್ಥಮಾಡಿಕೊಂಡಿರುವಿರಿ”
ಎಂದರು.
ದೇವರ ಪ್ರಧಾನ ಆಜ್ಞೆ ಯಾವುದು?
(ಮತ್ತಾಯ 22:34-40; ಲೂಕ
10:25-28)
28ಆಗ ಧರ್ಮಶಾಸ್ತ್ರಿಗಳಲ್ಲಿ ಓರ್ವನು
ಬಂದು ಸದ್ದುಕಾಯರು ಯೇಸುವಿನೊಂದಿಗೆ ಸೇರಿ ತರ್ಕಿಸುತ್ತಿರುವುದನ್ನೂ, ಯೇಸುವು ಅವರಿಗೆ
ಸರಿಯಾದ ಉತ್ತರವನ್ನುಕೊಟ್ಟಿರುವರೆಂಬುದನ್ನೂ ತಿಳಿದು, ಯೇಸುವಿಗೆ,
"ಎಲ್ಲಾ
ದೈವಾಜ್ಞೆಗಳಲ್ಲಿ ಮೊದಲನೆಯದು ಯಾವುದು?"
ಎಂದು ಪ್ರಶ್ನಿಸಿದನು. 29ಯೇಸು
ಪ್ರತ್ಯುತ್ತರವಾಗಿ ಅವನಿಗೆ,
"ಎಲ್ಲಾದೈವಾಜ್ಞೆಗಳಲ್ಲಿಯೂ
ಮೊದಲನೆಯದು, ‘ಇಸ್ರಾಯೇಲ್ ಜನಾಂಗವೇ ಕೇಳು; ನಮ್ಮ
ದೇವರಾದ ಸರ್ವೇಶ್ವರರೇ ಏಕೈಕ ದೇವರಾಗಿದ್ದಾರೆ; 30ನೀನು ನಿನ್ನ ದೇವರಾದಸರ್ವೇಶ್ವರರನ್ನು
ಪೂರ್ಣಹೃದಯದಿಂದಲೂ, ಪೂರ್ಣಆತ್ಮದಿಂದಲೂ, ಪೂರ್ಣಮನಸ್ಸಿನಿಂದಲೂ, ಪೂರ್ಣಶಕ್ತಿಯಿಂದಲೂ ಪ್ರೀತಿಸು; ಇದೆ ಮೊದಲನೆಯ ದೈವಾಜ್ಞೆ.
31ಅದರಂತೆಯೇ, ‘ನೀನು
ನಿನ್ನ ನೆರೆಯವನನ್ನು ನಿನ್ನನ್ನು ನೀನು ಪ್ರೀತಿಸುವಂತೆಯೇ ಪ್ರೀತಿಸಬೇಕು’
ಎಂಬುದು ಎರಡನೆಯ ಆಜ್ಞೆಯಾಗಿದೆ. ಇವುಗಳಿಗಿಂತ
ಶ್ರೇಷ್ಟ ದೈವಾಜ್ಞೆಯು ಮತ್ತೊಂದಿಲ್ಲ,"
ಎಂದು ಹೇಳಿದರು. 32ಅದಕ್ಕೆ
ಧರ್ಮಶಾಸ್ತ್ರಿಯು ಯೇಸುವಿಗೆ,
"ಬೋಧಕರೇ,
ನೀವು ಸತ್ಯವನ್ನೇ ಹೇಳಿರುವಿರಿ; ಏಕೆಂದರೆ ದೇವರು ಒಬ್ಬರೇ;
ಅವರ ಹೊರತು ಬೇರೊಬ್ಬರು ಇಲ್ಲವೇಇಲ್ಲ.
33ಅವರನ್ನು ಪೂರ್ಣ
ಹೃದಯದಿಂದಲೂ, ಪೂರ್ಣಮನಸ್ಸಿನಿಂದಲೂ, ಪೂರ್ಣಆತ್ಮದಿಂದಲೂ, ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು. ಅಂತೆಯೇ ತನ್ನ ನೆರೆಯವನನ್ನು
ತನ್ನನ್ನುಪ್ರೀತಿಸುವಂತೆಯೇ ಪ್ರೀತಿಸುವುದು ಸಕಲ ದಹನ ಬಲಿಗಳಿಗಿಂತಲೂ,
ಯಜ್ಞಗಳಿಗಿಂತಲೂ ಶ್ರೇಷ್ಟವಾದುದಾಗಿದೆ,"
ಎಂದನು.
34ಅವನು ಜಾಣತನದಿಂದ
ಉತ್ತರಕೊಟ್ಟಿದ್ದನ್ನು ಕಂಡು ಯೇಸು ಅವನಿಗೆ,
"ನೀನು
ದೇವರಸಾಮ್ರಾಜ್ಯಕ್ಕೆ ದೂರವಾದವನಲ್ಲ,"
ಎಂದರು.
ಅಂದಿನಿಂದ ಯೇಸುವನ್ನು ಪ್ರಶ್ನಿಸುವುದಕ್ಕೆ ಯಾರಿಗೂ ಧೈರ್ಯವಾಗಲಿಲ್ಲ.
ಯೇಸು ದಾವೀದನ ಪುತ್ರನೋ, ಪ್ರಭುವೋ?
(ಮತ್ತಾಯ 22:412-46; ಲೂಕ
20:41-44)
35 ಬಳಿಕ
ಯೇಸುವು ದೇವಾಲಯದಲ್ಲಿ ಬೋಧಿಸುತ್ತಾ,
"ಅಭಿಷಿಕ್ತ
ಲೋಕೋದ್ಧಾರಕನನ್ನು 'ದಾವೀದನ ಕುಮಾರ' ಎಂದು
ಧರ್ಮಶಾಸ್ತ್ರಿಗಳು ಕರೆಯುವರಲ್ಲ ಇದು ಹೇಗೆಸಾಧ್ಯ?
36
'ನಿನ್ನ
ವಿರೋಧಿಗಳನ್ನು
ನಾನಿನ್ನ
ಪಾದಪೀಠವನ್ನಾಗಿ
ಮಾಡುವತನಕ
ನೀನೆನ್ನ
ಬಲಗಡೆ
ಆಸೀನನಾಗಿರು
ಎಂದು
ಹೇಳಿಹರೆನ್ನ
ಪ್ರಭುವಿಗೆ
ಸರ್ವೇಶ್ವರನು'
ಎಂದು
ದಾವೀದನೇ ಪವಿತ್ರಾತ್ಮಭರಿತನಾಗಿ ನುಡಿದಿದ್ದಾನೆ. 37ದಾವೀದನು
ಸ್ವಯಂ ಯೇಸುವನ್ನು ಪ್ರಭುವೆಂದು ಕರೆದಿರುವಾಗ ಅವರು ಆತನ ಮಗನಾಗುವುದು
ಹೇಗೆ?"
ಎಂದು ಕೇಳಿದರು.
ಕಪಟ ಶಾಸ್ತ್ರಜ್ಞರ ಬಗ್ಗೆ ಎಚ್ಚರಿಕೆ!
(ಮತ್ತಾಯ 23:1-36; ಲೂಕ
20:45-47)
ಜನಸಮೂಹವು
ಯೇಸುವಿನ ಮಾತುಗಳನ್ನು ಸಂತೋಷದಿಂದ ಆಲಿಸುತ್ತಿತ್ತು. 38ಯೇಸುವು
ಅವರಿಗೆ ಬೋಧಿಸುತ್ತಾ,
"ಉದ್ದವಾದ
ಅಂಗಿಯನ್ನು ತೊಟ್ಟು ಪೇಟೆಯಬೀದಿಗಳಲ್ಲಿ ನಿಂತು
ವಂದನೆಗಳನ್ನೂ, 39ಸಭಾಮಂದಿರಗಳಲ್ಲಿ
ಮುಖ್ಯಪೀಠಗಳನ್ನೂ, ಔತಣಕೂಟಗಳಲ್ಲಿ ಶ್ರೇಷ್ಟವಾದ ಸ್ಥಾನಗಳನ್ನೂ ಅಪೇಕ್ಷಿಸುವ ಧರ್ಮಶಾಸ್ತ್ರಿಗಳ ವಿಷಯವಾಗಿಎಚ್ಚರಿಕೆ; 40ಇವರು
ವಿಧವೆಯರ ಮನೆಗಳನ್ನು ನುಂಗಿ, ನಟನೆಗಾಗಿ ಉದ್ದುದ್ದ
ಪ್ರಾರ್ಥನೆಗಳನ್ನು ಮಾಡುತ್ತಾರೆ; ಇಂಥವರು ದೇವರಿಂದ ಹೆಚ್ಚಿನ
ದಂಡನೆಯನ್ನು ಹೊಂದುವರು,"
ಎಂದರು.
ಬಡವಿಧವೆಯು ನೀಡಿದ ಉದಾರ ಕಾಣಿಕೆ
(ಲೂಕ 21:1-4)
41ಯೇಸು ದೇವಾಲಯದ ಕಾಣಿಕೆ
ಪೆಟ್ಟಿಗೆಗಳಿಗೆ ಎದುರಾಗಿ ಕುಳಿಕೊಂಡು ಜನರು
ಅದರಲ್ಲಿ ಕಾಣಿಕೆಯ ಹಣವನ್ನು ಹಾಕುತ್ತಿರುವುದನ್ನು
ನೋಡುತ್ತಿದ್ದರು; ಅನೇಕ ಐಶ್ವರ್ಯವಂತರು ಹೆಚ್ಚುಹೆಚ್ಚಾಗಿ ಹಣವನ್ನು ಹಾಕಿತ್ತಿದ್ದರು. 42ಅಷ್ಟರಲ್ಲಿ ಅಲ್ಲಿಗೆ ಒಬ್ಬ ಬಡ
ವಿಧವೆಯು ಬಂದು ತಾಮ್ರದ ಎರಡು
ಚಿಕ್ಕ ನಾಣ್ಯಗಳನ್ನು ಪೆಟ್ಟಿಗೆಯಲ್ಲಿ ಹಾಕಿದಳು. 43ಆಗ
ಯೇಸುವು ತಮ್ಮ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ,
"ಈ
ಪೆಟ್ಟಿಗೆಯಲ್ಲಿ ಹಣವನ್ನು ಹಾಕಿದವರೆಲ್ಲರಿಗಿಂತ ಈ
ಬಡ ವಿಧವೆಯು ಹೆಚ್ಚಾಗಿ ಹಾಕಿದ್ದಾಳೆ”
ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
44ಉಳಿದವರು ತಮ್ಮ
ಅಪರಿಮಿತವಾದ ಐಶ್ವರ್ಯದಲ್ಲಿ ಕಾಣಿಕೆಯನ್ನು ಹಾಕಿದರು; ಆದರೆ ಈಕೆಯು ತನ್ನ
ಬಡತನದಲ್ಲೂ ತನ್ನಲ್ಲಿದ್ದುದನ್ನೆಲ್ಲಾ ಅರ್ಪಿಸಿದಳು. ಆಕೆಯು ತನ್ನ ಜೀವನಾಧಾರವನ್ನೇ
ದಾನಮಾಡಿದ್ದಾಳೆ," ಎಂದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ